17ನೇ ಲೋಕಸಭೆಯ ಕೊನೆ ಅಧಿವೇಶನದ ಕೊನೆಯ ದಿನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

17ನೇ ಲೋಕಸಭೆಯ ಕೊನೆ ಅಧಿವೇಶನದ ಕೊನೆಯ ದಿನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಆದ ಬದಲಾವಣೆ ಹಾಗೂ ಮಹತ್ವದ ವಿಚಾರಗಳ ಕುರಿತು ಸುಧಾರಣೆ (Reform), ನಿರ್ವಹಣೆ (Perform) ಮತ್ತು ಬದಲಾವಣೆ (Transform) ನಮ್ಮ ಮಂತ್ರ ಎಂದು ತಿಳಿಸಿದರು.

ಇದು ಲೋಕತಂತ್ರದ ಅತ್ಯಂತ ಮಹತ್ವದ ದಿನ ಎನ್ನುತ್ತಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಐದು ವರ್ಷಗಳಲ್ಲಿ ದೇಶ ಭಾರೀ ಬದಲಾವಣೆ ಕಂಡಿದೆ. ಲೋಕಸಭೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಿದ್ದಾರೆ. 17ನೇ ಲೋಕಸಭೆಯಲ್ಲೂ ಜನರು ಆಶೀರ್ವದಿಸುವ ನಿರೀಕ್ಷೆ ಇದೆ ಎನ್ನುತ್ತ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.

ಹೊಸ ಸಂಸತ್‌ ಭವನ ನಿರ್ಮಾಣ, ಸೆಂಗೋಲ್‌ ಸಂಪ್ರದಾಯ ಸ್ಥಾಪನೆಯಂಥ ವಿಚಾರಗಳನ್ನು ಅವರು ಪ್ರಸ್ತಾಪ ಮಾಡುತ್ತಾ, ಈ ಬಾರಿ ಜಿ-20 ಶೃಂಗಸಭೆಯ ಆತಿಥ್ಯ ಭಾರತಕ್ಕೆ ಸಿಕ್ಕಿದ್ದು, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ಭಾರತ ಪ್ರಜಾಪ್ರಭುತ್ವದ ತಾಯಿ ಎನ್ನುವುದನ್ನು ನೀವು ಜಗತ್ತಿಗೆ ತೋರಿಸಿದ್ದೀರಿ. ಈ ವೇಳೆ ವಿಶ್ವದ ಎಲ್ಲಾ ದೇಶಗಳ ಸ್ಪೀಕರ್‌ಗಳ ಸಮಾವೇಶ ಕೂಡ ನಡೆಯಿತು ಎಂದು ಮೋದಿ ತಿಳಿಸಿದರು.

ಈ ವೇಳೆ ಸ್ಪೀಕರ್‌ ಓಂ ಬಿರ್ಲಾ ಅವರ ಕಾರ್ಯನಿರ್ವಹಣೆಯ ಕುರಿತು ಮಾತನಾಡಿದ ಮೋದಿ, ಕರೋನಾದ ಕಠಿಣ ಸಮಯದಲ್ಲೂ ಲೋಕಸಭೆ ಕೆಲಸ ಮಾಡಿದೆ. ಎಲ್ಲಾ ಸನ್ನಿವೇಶಗಳಲ್ಲೂ ಸಂಸದರು ಧೈರ್ಯದಿಂದ ಕೆಲಸ ಮಾಡಿದ್ದಾರೆ. ಈ ಐದು ವರ್ಷಗಳಲ್ಲಿ ಇಡೀ ಮಾನವ ಸಂಕಟ ಎದುರಾಗಿತ್ತು. ಯಾರು ಉಳಿಯುತ್ತಾರೆ, ಯಾರು ಉಳಿಯುವುದಿಲ್ಲ ಎನ್ನುವ ಸ್ಥಿತಿ ಎದುರಾಗಿತ್ತು. ಅಂಥ ಹೊತ್ತಲ್ಲೂ ತಮ್ಮ ಕರ್ತವ್ಯ ಯಶಸ್ವಿಯಾಗಿ ನಿರ್ವಹಣೆ ಮಾಡಿದರು. ಅಂಥ ಹೊತ್ತಲ್ಲಿ ಸಂಸದ ನಿಧಿ ಬಿಡುವಂತೆ ಒಂದು ಸಾಲಿನ ನಿರ್ಣಯ ಇಟ್ಟಾಗ ಎಲ್ಲರೂ ಒಪ್ಪಿದ್ದರು. ಅಲ್ಲದೇ ಸಂಸದರ ವೇತನ ಕಡಿತಕ್ಕೂ ಒಪ್ಪಿದ್ದರು ಎಂದು ಮೋದಿ ಪ್ರಶಂಸಿದರು.

17ನೇ ಲೋಕಸಭೆಯ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಅದರ ಮೊದಲ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ 30 ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಅದರಲ್ಲಿ “ಇದು ಕೂಡ ಒಂದು ದಾಖಲೆಯಾಗಿದೆ” ಎಂದು ಹೇಳಿದರು.

You might also like
Leave A Reply

Your email address will not be published.