ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಕೋರಿದ ಮೋದಿ – ನಿಮ್ಮ ನಾಯಕರ ವಿಶೇಷ ಶುಭಾಶಯಗಳಿವು

ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ತಮ್ಮ ಎಕ್ಸ್ ಖಾತೆಯಲ್ಲಿ ಅದು ಕನ್ನಡದಲ್ಲೇ ಶುಭಾಶಯ ಕೋರಿದ್ದು, ಕನ್ನಡಿಗರಲ್ಲಿ ಸಂತಸ ಮನೆ ಮಾಡಿದೆ. ಹಾಗಾದರೆ ಯಾವ್ಯಾವ ಗಣ್ಯರು ಶುಭ ಕೋರಿದ್ದಾರೆ ಎಂಬುದನ್ನು ನೋಡೋಣ ಬನ್ನಿ..

1) ಪ್ರಧಾನಿ ನರೇಂದ್ರ ಮೋದಿ:

“ಯುಗಾದಿಯು ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಶುಭಾಶಯಗಳು. ಎಲ್ಲರಿಗೂ ಅಪರಿಮಿತ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶಿಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಂತೋಷವನ್ನು ತರಲಿ” ಎಂದು ಹಾರೈಸಿದ್ದಾರೆ.

ಇದಿಷ್ಟೇ ಅಲ್ಲದೆ ತೆಲುಗು, ಮಣಿಪುರಿಯಲ್ಲಿ ಯುಗಾದಿಯಲ್ಲಿ ಸಜಿಬು ನೋಂಗ್ಮಾ ಪನ್ಬಾ ಎಂದು ಕರೆಯುತ್ತಾರೆ ಮೋದಿ ಶುಭ ಹಾರೈಸಿದ್ದಾರೆ.

ಮೋದಿ ಮತ್ತೊಂದು ಪೋಸ್ಟ್​ ನಲ್ಲಿ ದೇಶದ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಚೈತ್ರ ನವರಾತ್ರಿಯ ಶುಭಾಶಯಗಳು ಎಂದು ಬರೆದಿದ್ದಾರೆ.ಶಕ್ತಿಯ ಆರಾಧನೆಯ ಈ ಮಹಾ ಹಬ್ಬವು ಎಲ್ಲರಿಗೂ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಆರೋಗ್ಯವನ್ನು ತರಲಿ ಎಂದು ನಾವು ಬಯಸುತ್ತೇವೆ ಎಂದಿದ್ದಾರೆ.

ಗುಡಿಪಾಡ್ವಾ, ಯುಗಾದಿ, ಚೇತಿ ಚಂದ್, ನವ್ರೆಹ್ ಮತ್ತು ಇತರ ವಿವಿಧ ಭಾಷೆಗಳಲ್ಲಿ ಹಬ್ಬಗಳ ಶುಭಾಶಯಗಳನ್ನು ತಿಳಿಸಿದರು.

2) ಕೇಂದ್ರ ಸಚಿವ ಅಮಿತ್ ಶಾ:

“ಯುಗಾದಿಯ ಶುಭ ಸಂದರ್ಭದಲ್ಲಿ ಕರ್ನಾಟಕದ ನನ್ನ ಎಲ್ಲಾ ಸಹೋದರ-ಸಹೋದರಿಯರಿಗೆ ಹೊಸ ವರ್ಷದ ಶುಭಕಾಮನೆಗಳು. ಸಂತೋಷದ ಈ ಸಂದರ್ಭದಲ್ಲಿ ಹಬ್ಬದ ಸ್ಫೂರ್ತಿ ಮತ್ತು ಸೊಬಗು ಸದಾ ನಿಮ್ಮ ಜೊತೆಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಅವರು ಬರೆದಿದ್ದಾರೆ.

3) ಮಾಜಿ ಸಿಎಂ ಬಸವರಾಜ ಬೊಮ್ಮಾಯಿ:

“ನಾಡಿನ ಸಮಸ್ತ ಜನತೆ ಹಿಂದೂ ನವ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ಕ್ರೋಧಿ ನಾಮ ಸಂವತ್ಸರವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ. ಸರ್ವರಗೂ ಶುಭವಾಗಲಿ….” ಎಂದು ಶುಭ ಹಾರೈಸಿದ್ದಾರೆ.

4) ಮುಖ್ಯಮಂತ್ರಿ ಸಿದ್ದರಾಮಯ್ಯ:

“ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕು ಎನ್ನುವುದೇ ಯುಗಾದಿಯ ಜೀವನ ಸಂದೇಶ. ಯುಗ ಪರಿವರ್ತನೆಯ ಸಂದೇಶದ ಯುಗಾದಿ ಹಬ್ಬ ನಾವೆಲ್ಲ ಬಯಸುವ ಬದಲಾವಣೆಯನ್ನು ಹೊತ್ತು ತರಲಿ. ಸಮಸ್ತ ಜನರ ಬಾಳಲ್ಲಿ ಹೊಸ ಉತ್ಸಾಹ, ಹೊಸ ಚಿಂತನೆ, ಹೊಸ ಭರವಸೆಗಳನ್ನು ತುಂಬಲಿ. ಬೆಲ್ಲದಂತ ಸುಖ – ಸಮೃದ್ಧಿ ಮಾತ್ರವೇ ನಿಮ್ಮೆಲ್ಲರ ಬದುಕಲ್ಲಿ ತುಂಬಿರಲಿ‌ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ಯುಗಾದಿಯ ಶುಭಾಶಯಗಳು” ಎಂದು ಬರೆದಿದ್ದಾರೆ.

5) ಡಿಸಿಎಂ ಡಿಕೆ ಶಿವಕುಮಾರ್:

“ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ. ಅನ್ನದಾತನ ಬದುಕು ಹಸನಾಗಲಿ, ದುಡಿವ ಕೈಗಳಿಗೆ ಶಕ್ತಿ ತುಂಬಲಿ. ಎಲ್ಲರ ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ” ಎಂದು ಬರೆದಿದ್ದಾರೆ. ಇದರೊಂದಿಗೆ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

You might also like
Leave A Reply

Your email address will not be published.