ಅಯೋಧ್ಯೆಯ ರಾಮಮಂದಿರಕ್ಕಾಗಿ ಕರುನಾಡಿನ ಕೊಡುಗೆಗಳು: ಯಾವುವು?

ಅಯ್ಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಶ್ರೀರಾಮನ ಭಕ್ತರಲ್ಲಿ ಸಂಭ್ರಮ ಇಮ್ಮಡಿಯಾಗಿದ್ದು, ರಾಮಲಲ್ಲಾನ ಪ್ರತಿಷ್ಠಾಪನೆ ಪ್ರಯುಕ್ತ ನಾವೇನು ಮಾಡಬಹುದು ಎಂದು ಸಹಸ್ರಾರು ಮಂದಿ ಆಲೋಚಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಮಮಂದಿರಕ್ಕಾಗಿ ನಮ್ಮ ರಾಜ್ಯದಿಂದ ಹಲವು ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಕನ್ನಡಿಗರ ಹೆಮ್ಮೆಯ ಸಂಗತಿ. ಹಾಗಾದರೆ, ಕರುನಾಡು ಕೊಟ್ಟ ಕೊಡುಗೆಗಳು ಯಾವುದು? ಎಂಬ ಮಾಹಿತಿ ಇಲ್ಲಿದೆ.

1. ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ವಿಗ್ರಹವನ್ನು ಕೆತ್ತಿದ್ದು ನಮ್ಮ ಸಾಂಸ್ಕೃತಿಕ ನಗರಿಯ ಶಿಲ್ಪಯಾದ ಅರುಣ್ ಯೋಗಿರಾಜ್ ಅವರು. ಅರುಣ್ ಯೋಗಿರಾಜ್ ಯಾರು? ಎಂಬಿತ್ಯಾದಿ ಮಾಹಿತಿಯನ್ನು ನಮ್ಮ ಇತಿಹಾಸ ವೆಬ್ ಸೈಟ್ ಅಲ್ಲಿ ನೋಡಬಹುದು.

2. ಉಡುಪಿ ವಿಜ್ಞಾನಿ ಆರ್ ಮನೋಹರ್ ಸಂಶೋಧಿಸಿರುವ ದೇಸಿ ನಿರ್ಮಿತ ಸರಳ ಉತ್ತಮ ಗುಣಮಟ್ಟದ ಸಾಕಷ್ಟು ವಿಶೇಷತೆಗಳನ್ನ ಹೊಂದಿರುವ ಟೆಲಿಸ್ಕೋಪ್ ಅನ್ನು ಶ್ರೀ ರಾಮನ ಭದ್ರತೆಗೆ ಬಳಸಿಕೊಳ್ಳುತ್ತಿರುವುದು ಉಡುಪಿಯ ನಾಗರಿಕರಿಗೆ ಹಾಗೂ ರಾಜ್ಯಕ್ಕೆ ಸಂತಸ ತಂದಿದೆ.

3. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ವಿಶ್ವಸ್ಥರಾಗಿರುವುದು ಕನ್ನಡಿಗರ ಹೆಮ್ಮೆ.

4. ಶಿರಸಿ ಮೂಲದ ಶ್ರೀ ಗೋಪಾಲ್ ಜಿ ನಾಗರಕಟ್ಟೆ ಕಟ್ಟಡ ಸಮಿತಿಯ ಉಸ್ತುವಾರಿಯಾಗಿ ಕನ್ನಡಿಗರ ಪರವಾಗಿ ಸೇವೆ ಸಲ್ಲಿಸುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ.

5. ಬಾಲರಾಮನ ಮೂರ್ತಿ ಕೆತ್ತನೆಗೆ ನಮ್ಮ ನಾಡಿನ ಹೆಗ್ಗಡದೇವನ ಕೋಟೆಯ ಕಲ್ಲು ಹೋಗಿರುವುದು ಮತ್ತೊಂದು ಹೆಮ್ಮೆಯ ಗರಿ.

6. ರಾಮನ ಸಂಪೂರ್ಣ ದೇವಾಸ್ಥಾನದ ಕಟ್ಟಡದ ಕೆಳಗೆ ಕಲ್ಲನ್ನು ಹಾಕಲು ಕರ್ನಾಟಕದ ಕಲ್ಲನ್ನೆ ಬಳಸುತ್ತಿರುವುದು ಕರುನಾಡಿನ ವೈಶಿಷ್ಟ್ಯ.

ಇದರೊಂದಿಗೆ ಯೂಟ್ಯೂಬ್‌ನಲ್ಲಿ ದೇಶ-ವಿದೇಶಗಳ ಪ್ರವಾಸ ಮಾಡುತ್ತ ತಮ್ಮದೇ ಆದ ವಿಡಿಯೋಗಳ ಮೂಲಕವೇ ರಂಜಿಸುತ್ತ, ಮಾಹಿತಿಯ ಹೂರಣವನ್ನೇ ಉಣಬಡಿಸುವ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ ಇದೀಗ ತಮ್ಮ ಅಭಿಮಾನಿಗಳಿಗೆ ಶ್ರೀರಾಮನ ಪುಣ್ಯಭೂಮಿ ಅಯೋಧ್ಯೆ, ಸರಯು ನದಿ ಹಾಗೂ ಅಲ್ಲಿಯ ಸುತ್ತಮುತ್ತ ಸ್ಥಳಗಳ ಪರಿಚಯವನ್ನು ಕನ್ನಡದಲ್ಲೇ ತಿಳಿಸುವ ಮೂಲಕ ಕನ್ನಡಿಗರಿಗೆ ಬಲು ಹತ್ತಿರವಾಗಿದ್ದಾರೆ. ಅಲ್ಲದೇ ಅಯೋಧ್ಯೆಯಿಂದ ರಾಮಾಯಣಕ್ಕೆ ತೀರಾ ಹತ್ತಿರದ ಸಂಪರ್ಕ ಇರುವ ನೇಪಾಳಕ್ಕೂ ಭೇಟಿ ನೀಡಿದ್ದು, ಅಲ್ಲಿಯ ಕೆಲವು ಸ್ಥಳಗಳು, ಆಹಾರ ಪದ್ಧತಿ, ಸಂಸ್ಕೃತಿ, ಇನ್ನಿತರ ವೈಶಿಷ್ಟ್ಯಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ.

You might also like
Leave A Reply

Your email address will not be published.